TTD SAPTHAGIRI 2022 JANUARY KANNADA MAGAZINE DOWNLOAD | TTD eBooks Download
Language: KANNADA
Year: 2022
ಸಂಭ್ರಮದ ಸಂಕ್ರಾಂತಿ
ಸಂಪಾದಕೀಯ
ಇನ್ನೇನು ಸಂತಿ ಹಬ್ಬ ಪ್ರಾರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ಉಾಲವನ್ನು ಸುಗ್ಗಿಕಾಲ ಎಂದು ಹಿಂದಿನ ಕಾಲದಿಂದಲೂ ಕರೆಯುತ್ತಿದ್ದೇವೆ, ಈ ಹಬ್ಬದ ವಿಶೇಷತೆ ಏನೆಂದರೆ ಈ ಪರ್ವ ಕಾಲವನ್ನು ಅನೇಕ ರೀತಿಯ ಪುಣ್ಯರಾರ್ಯ ಗಗೆ ಮೀಸಅಡಬಹುದು. ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬ ಅನೇಕ ಸಂಭ್ರಮಗಳನ್ನು ಒಳಗೊಂಡಿದೆ. ಭೋಗಿ, ಸಂಕ್ರಾಂತಿ, ಕಲಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವ ವಾಡಿಕೆ ಇದೆ.
ಭೋಗಿ ಹಬ್ಬದಂದು ಅನೇಕರ ಸಂಪ್ರದಾಯದ ಪರವಾಗಿ ತಾಂಬೂಲವನ್ನು ನೀಡುವುದು ಹಾಗೂ ಇಂದು ಹುಗ್ಗಿ, ಪಾಯಸವನ್ನು ದೇವಲಗೆ ನೈವೇದ್ಯವನ್ನು ಅರ್ಪಿಸುವ ಪದ್ಧತಿ ಅನೇಕ ಕಡೆಗಳಲ್ಲಿ ಇದೆ. ಮುಖ್ಯವಾಗಿ ದಕ್ಷಿಣಭಾರತದಲ್ಲಿ ಆಚಲಿಸುವ ಈ ಹಬ್ಬದಲ್ಲಿ ಭೋಗಿ ಹಬ್ಬವನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.
ಹಾಗೆಯೇ ಸಂಕ್ರಾಂತಿಯಂದು ಗೋವುಗಳನ್ನು ಚೆನ್ನಾಗಿ ಶುದ್ಧಗೊಳಿಸಿ, ಅವುಗಳನ್ನು ಅಂದವಾಗಿ ಅಲಂಕರಿಸಿ ಅವುಗಳನ್ನು ಬೆಂಕಿಯ ಮೇಲೆ ಹಾರುವಂತೆ ಮಾಡುತ್ತಾರೆ. ಅದನ್ನು ಕಿತ್ತು, ಹಾಯಿಸುವುದು ಎಂದು ಕರೆಯುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇಲ್ಲದಿಲ್ಲ. ಅವುಗಳನ್ನು ಬೆಂಕಿಯ ಮೇಲೆ ಹಾಲಸಿದಾಗ ಅವುಗಳಿಗೆ ಭಯದಿಂದಾಗಿ ಈ ಕಿಚ್ಚುಹಾಯಿಸುವ ಕಾರ್ಯಕ್ರಮ ಎರುಪೇರಾಗುವ ಸಾಧ್ಯತೆ ಇದೆ. ಈ ಕಾರ್ಯಕ್ರಮವು ಪ್ರತೀ ಗ್ರಾಮದಲ್ಲೂ, ಹಳ್ಳಿಯಲ್ಲೂ, ನಗರಗಳಲ್ಲೂ ಆಚಲಿಸುತ್ತಾರೆ. ಗೋವುಗಳನ್ನು ಪೂಜಿಸಿ ಅವುಗಾಂದ ನಮಗೆ ದೊರೆಯುವ ಹಾಆನಿಂದ ಅನೇಕ ಪದಾರ್ಥ ಗಳನ್ನು ತಯಾಲಿಸುವ ಪದ್ಧತಿಯೂ ಈಗ ಬಸೃತವಾಗಿದೆ. ಹಾಲಿನಿಂದ ತಯಾಲಿಸುವ ತುಪ್ಪ, ಬೆಣ್ಣಿಗಳಿಗೆ ಅಪಾರವಾದ ಬೇಡಿಕೆಯೂ ಇದೆ.
ಹೀಗೆ ಆ ದಿನ ತಯಾರಿಸುವ ಮಿಶ್ರಣವಾದ ಎಳ್ಳು, ಬೆಲ್ಲ, ಒಣಕೊಬ್ಬರಿ, ಕಡಲೆಬೀು ಇವುಗಳ ಸೇವನೆಯಿಂದ ಚಳಗಾಲದಲ್ಲಿ ಹರಡಬಹುದಾದ ಅನೇಕ ಖಾಯಿಲೆಗಳನ್ನು ನಾವು ಹೊಡೆದೋಡಿಸಬಹುದು.ಒಂದು ಜನಪದದ ನಂಬಿಕೆಯ ಪ್ರಕಾರ ಶಿವಪಾರ್ವತಿಯರು ಲೋಕಸಂಚಾರಕ್ಕಾಗಿ ಹೊರಟರೆಂದು ಆ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಗಳಗೂ ಶುಭಫಲವನ್ನು ಪ್ರಸಾದಿಸುತ್ತಾರೆ ಎಂಬ ನಂಬಿಕೆಯೂ ಇದೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಕರೆಯುತ್ತಾರೆ,
ಮುಖ್ಯವಾಗಿ ಉತ್ತರಾಯಣದಲ್ಲಿ ಸೂರ್ಯನು ಧನುರಾಶಿಯಿಂದ ಮಕರರಾಶಿಗೆ ಪ್ರವೇಶಿಸುತ್ತಾನೆ. ಆ ದಿನಗಳಲ್ಲ ಬೆಳಕಿನ ಪ್ರಖರತೆ ಹೆಚ್ಚಾಗಿರುತ್ತದೆ. ಸೂರ್ಯನು ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಾನೆ. ಈ ಇರು ತಿಂಗನ ಬೆಳಕು ಹೆಚ್ಚಾಗಿರುತ್ತದೆ. ಜೂನ್ ೧೫ ರ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ.ಮಹಾಭಾರತದ ಪ್ರಕಾರ ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲಕ್ಕಾಗಿ ನಿರೀಕ್ಷಿಸಿ ನಂತರ ಪ್ರಾಣತ್ಯಾಗ ಮಾಡಿದ್ದಾರೆ.
ಇಂತಹಾ ಪುಣ್ಯಕಾಲವಾದ ಸಂಕ್ರಾಂತಿಯಂದು ಎಲ್ಲರೂ ಎಳ್ಳು ಬೆಲ್ಲ, ಸಕ್ಕರೆ ಅಚ್ಚು ಮೊದಲಾದವುಗಳನ್ನು ವಿನಿ ಮಯ ಮಾಡಿಕೊಂಡು ಎಲ್ಲರೊಂದಿಗೆ ಸಖ್ಯತೆ ಸ್ನೇಹ ಭಾವನೆ, ಸಂಘೀಭಾವವನ್ನು ಹೊಂದುತ್ತಾ ನಮ್ಮ ದೇಶದ ಒಗ್ಗಟ್ಟನ್ನು
ಕಾಪಾಡೋಣ.
ಗೋವುಗಳನ್ನು ಪೂಜಿಸೋಣ, ಗೋವುಗಳನ್ನು ಸಂರಕ್ಷಿಸೋಣ
keywords:TTD Books Download ,Kannada Sapthagiri Book Download pdf ,Kannada Sathagiri Magazine , Sapthagiri Book Kannada Books Downloads